ನಮಸ್ಕಾರ ಸ್ನೇಹಿತರೆ, ನೀವು ನರ್ಸಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೀರಾ ಮತ್ತು ಬೆಂಗಳೂರಿನಲ್ಲಿ ಉದ್ಯೋಗಾವಕಾಶವನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ ನಿಮಗಾಗಿ ಒಂದು ಸಂತೋಷದ ಸುದ್ದಿ ಇದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS), ಬೆಂಗಳೂರು ವತಿಯಿಂದ ಖಾಲಿ ಇರುವ 55 ನರ್ಸಿಂಗ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ.

ವಿಶೇಷವಾಗಿ ಗಮನಿಸಬೇಕಾದ ಸಂಗತಿ ಎಂದರೆ, ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ನಡೆಸಲಾಗುವುದಿಲ್ಲ. ಅಭ್ಯರ್ಥಿಗಳನ್ನು ಕೇವಲ ವಾಕ್-ಇನ್ ಸಂದರ್ಶನ (Walk-in Interview) ಮೂಲಕ ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಈ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಕೆಳಗೆ ವಿವರವಾಗಿ ನೀಡಲಾಗಿದ್ದು, ದಯವಿಟ್ಟು ಕೊನೆಯವರೆಗೂ ಓದಿರಿ.

DHFWS ಬೆಂಗಳೂರು ನೇಮಕಾತಿ.

  • ಸಂಸ್ಥೆಯ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಬೆಂಗಳೂರು (DHFWS ಬೆಂಗಳೂರು)
  • ಹುದ್ದೆಯ ಹೆಸರು : ನರ್ಸಿಂಗ್ ಅಧಿಕಾರಿ
  • ಒಟ್ಟು ಖಾಲಿ ಹುದ್ದೆಗಳು : 55
  • ಉದ್ಯೋಗ ಸ್ಥಳ : ಬೆಂಗಳೂರು, ಕರ್ನಾಟಕ

ವಯೋಮಿತಿ

ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷಗಳನ್ನು ಮೀರಿರಬಾರದು.

ಶೈಕ್ಷಣಿಕ ಅರ್ಹತೆ

ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ B.Sc ನರ್ಸಿಂಗ್ ಅಥವಾ GNM ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.

ವೇತನ

ಅಭ್ಯರ್ಥಿಗಳಿಗೆ ಮಾಸಿಕ ₹18,714/- ವೇತನ ನೀಡಲಾಗುತ್ತದೆ.

ವಿಶೇಷ ಸೂಚನೆ :ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಸಂದರ್ಶನ ನಡೆಯುವ ದಿನಾಂಕಗಳು

  • ಜನವರಿ: 27
  • ಫೆಬ್ರವರಿ :02, 09, 16, 23
  • ಮಾರ್ಚ್ :02, 09, 16 (ಕೊನೆಯ ದಿನಾಂಕ)

ಸಂದರ್ಶನ ನಡೆಯುವ ಸ್ಥಳ:

ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣ, ಹಳೆಯ ಟಿಬಿ ಆಸ್ಪತ್ರೆ, ಹಳೆಯ ಮದ್ರಾಸ್ ರಸ್ತೆ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ, ಬೆಂಗಳೂರು – 560038.

ಸಂದರ್ಶನಕ್ಕೆ ಹಾಜರಾಗುವ ವಿಧಾನ :

  • ಮೊದಲನೆಯದಾಗಿ ಅಧಿಕೃತ ವೆಬ್‌ಸೈಟ್ bengaluruurban.nic.in ಗೆ ಭೇಟಿ ನೀಡಿ, ಪ್ರಕಟಿತ ಅಧಿಸೂಚನೆಯನ್ನು ಗಮನವಾಗಿ ಓದಿರಿ.
  • ಅಲ್ಲಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಅಥವಾ ನೀಡಿರುವ ಆನ್‌ಲೈನ್ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
  • ನಿಮ್ಮ ಎಲ್ಲಾ ಶೈಕ್ಷಣಿಕ ಪ್ರಮಾಣಪತ್ರಗಳು, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಗಾತ್ರದ ಫೋಟೋ ಹಾಗೂ ಅನುಭವ ಪ್ರಮಾಣಪತ್ರಗಳು (ಇದ್ದಲ್ಲಿ) ಇವುಗಳ ನಕಲು ಪ್ರತಿಗಳು ಮತ್ತು ಮೂಲ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
  • ಅಧಿಸೂಚನೆಯಲ್ಲಿ ತಿಳಿಸಿರುವ ನಿಗದಿತ ದಿನಾಂಕಗಳಲ್ಲಿ ಇಂದಿರಾನಗರದಲ್ಲಿರುವ ಕಚೇರಿಗೆ ವಾಕ್-ಇನ್ ಸಂದರ್ಶನಕ್ಕೆ ಹಾಜರಾಗಿರಿ.

Leave a Reply

Your email address will not be published. Required fields are marked *