ನಮಸ್ಕಾರ ಸ್ನೇಹಿತರೇ, ಪಿಎಂ ಸ್ವನಿಧಿ (PM Swanidhi) ಯೋಜನೆವು ಬೀದಿ ವ್ಯಾಪಾರಿಗಳಿಗೆ ಆರ್ಥಿಕ ಸಹಾಯ ನೀಡುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ನಿಮ್ಮ ಮೊಬೈಲ್ ಫೋನ್ ಮೂಲಕವೇ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಹಂತ-ಹಂತದ ವಿವರ ಇಲ್ಲಿದೆ. ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು: ಆಧಾರ್ ಕಾರ್ಡ್: ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರಬೇಕು. ಬ್ಯಾಂಕ್ ಖಾತೆ: ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಆಗಿರುವ ಬ್ಯಾಂಕ್ ಪಾಸ್ ಬುಕ್. ಗುರುತಿನ ಚೀಟಿ: ನಗರ ಸ್ಥಳೀಯ ಸಂಸ್ಥೆಗಳು (ULB) ನೀಡಿದ ವ್ಯಾಪಾರ ಪ್ರಮಾಣಪತ್ರ ಅಥವಾ ಶಿಫಾರಸು ಪತ್ರ ಮೊಬೈಲ್ ಸಂಖ್ಯೆ: OTP ಪಡೆಯಲು ಸಕ್ರಿಯವಾಗಿರುವ ಮೊಬೈಲ್ ಸಂಖ್ಯೆ. ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ: 1.ಆಪ್ ಅಥವಾ ವೆಬ್ಸೈಟ್ಗೆ ಭೇಟಿ ನೀಡಿ: ನಿಮ್ಮ ಮೊಬೈಲ್ನ ಪ್ಲೇ ಸ್ಟೋರ್ನಲ್ಲಿ “PM SVANidhi” ಅಧಿಕೃತ ಆಪ್ ಅನ್ನು ಡೌನ್ಲೋಡ್ ಮಾಡಿ ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಅಲ್ಲಿಂದಲೇ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿ. 2.ಲಾಗಿನ್ ಪ್ರಕ್ರಿಯೆ: ಆಪ್ ತೆರೆಯಿದ ನಂತರ, ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಹಾಗೂ ಕ್ಯಾಪ್ಚಾ ಕೋಡ್ ಅನ್ನು ಸರಿಯಾಗಿ ಟೈಪ್ ಮಾಡಿ.ನಂತರ ನಿಮ್ಮ ಮೊಬೈಲ್ಗೆ ಬರುವ OTP ಅನ್ನು ದಾಖಲಿಸಿ, ಯಶಸ್ವಿಯಾಗಿ ಲಾಗಿನ್ ಆಗಿರಿ. 3.ವರ್ಗವನ್ನು ಆಯ್ಕೆ ಮಾಡಿ: ನೀವು ಯಾವ ವರ್ಗಕ್ಕೆ ಸೇರಿದವರು ಎಂಬುದನ್ನು ಆರಿಸಿ (ಉದಾಹರಣೆಗೆ: ಈಗಾಗಲೇ ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟವರು ಅಥವಾ ಶಿಫಾರಸು ಪತ್ರ ಹೊಂದಿರುವವರು). 4.ಆಧಾರ್ ದೃಢೀಕರಣ: ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ಆಧಾರ್ಗೆ ಸಂಪರ್ಕಗೊಂಡಿರುವ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ, ನಿಮ್ಮ ವಿವರಗಳನ್ನು ದೃಢೀಕರಿಸಿ. 5.ಅರ್ಜಿ ಫಾರಂ ಭರ್ತಿ ಮಾಡಿ: ನಿಮ್ಮ ಹೆಸರು, ವಿಳಾಸ, ವ್ಯಾಪಾರದ ವಿವರಗಳು ಹಾಗೂ ಬ್ಯಾಂಕ್ ಖಾತೆಯ ಮಾಹಿತಿಯನ್ನು ಸರಿಯಾಗಿ ನಮೂದಿಸಿ.ದೃಢೀಕರಣಕ್ಕಾಗಿ ನಿಮ್ಮ ವ್ಯಾಪಾರ ಗುರುತಿನ ಚೀಟಿ ಅಥವಾ ಅಗತ್ಯವಿರುವ ದಾಖಲೆಗಳ ಫೋಟೋವನ್ನು ಅಪ್ಲೋಡ್ ಮಾಡಬೇಕಾಗಬಹುದು. 6.ಸಲ್ಲಿಸಿ (Submit ಮಾಡಿ): ನೀವು ನಮೂದಿಸಿದ ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಚೆನ್ನಾಗಿ ಪರಿಶೀಲಿಸಿ, ನಂತರ ‘Submit’ ಬಟನ್ ಮೇಲೆ ಕ್ಲಿಕ್ ಮಾಡಿ.ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದ ಬಳಿಕ ನಿಮಗೆ ಒಂದು ಅಪ್ಲಿಕೇಶನ್ ಸಂಖ್ಯೆ ಸಿಗುತ್ತದೆ. ಅದನ್ನು ಮುಂದಿನ ಮಾಹಿತಿಗಾಗಿ ಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಳ್ಳಿ. ಸಾಲದ ಮೊತ್ತ: ಮೊದಲ ಹಂತದಲ್ಲಿ ನೀವು ₹10,000 ರಿಂದ ₹15,000ರವರೆಗೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.ಈ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿದರೆ, ಮುಂದಿನ ಹಂತಗಳಲ್ಲಿ ₹20,000 ಮತ್ತು ನಂತರ ₹50,000ರವರೆಗೆ ಹೆಚ್ಚುವರಿ ಸಾಲ ಪಡೆಯುವ ಅವಕಾಶ ದೊರೆಯುತ್ತದೆ. Post navigation KKRTC Recruitment 2026:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕ ಹುದ್ದೆಗಳ ನೇಮಕಾತಿ. ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ | UPSC Recruitment 2026