ನಮಸ್ಕಾರ ಸ್ನೇಹಿತರೆ, ನೀವು ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದೀರಾ? ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ನಿಮ್ಮ ಪ್ರತಿಭೆಯನ್ನು ಬಳಸಿಕೊಳ್ಳಬೇಕೆಂಬ ಆಸೆಯಿದೆಯೇ? ಹಾಗಿದ್ದರೆ ಇದು ನಿಮ್ಮಿಗೆ ಒಳ್ಳೆಯ ಅವಕಾಶ. ಕರ್ನಾಟಕದ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಯಾದ Indian Institute of Technology Dharwad ನಲ್ಲಿ ಖಾಲಿ ಇರುವ ಕ್ರೀಡಾ ತರಬೇತುದಾರರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬಹುದು.

ಇಲ್ಲಿ ಕೇವಲ ಪದವಿ ಹೊಂದಿದವರಿಗೆ ಮಾತ್ರವಲ್ಲ, 12ನೇ ತರಗತಿ ಪೂರ್ಣಗೊಳಿಸಿದವರಿಗೂ ಅವಕಾಶ ಕಲ್ಪಿಸಲಾಗಿದೆ.ಈ ಉದ್ಯೋಗಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ. ಆಸಕ್ತರು ಎಲ್ಲಾ ವಿವರಗಳನ್ನು ಗಮನದಿಂದ ಓದಿ, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಐಐಟಿ ಧಾರವಾಡ ನೇಮಕಾತಿ:

  • ಸಂಸ್ಥೆಯ ಹೆಸರು : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಧಾರವಾಡ ( ಐಐಟಿ ಧಾರವಾಡ )
  • ಹುದ್ದೆಗಳ ಸಂಖ್ಯೆ: 06
  • ಹುದ್ದೆಯ ಹೆಸರು: ಕ್ರೀಡಾ ತರಬೇತುದಾರರು
  • ಉದ್ಯೋಗ ಸ್ಥಳ: ಧಾರವಾಡ – ಕರ್ನಾಟಕ

ಅರ್ಹತೆ

  • 12ನೇ ತರಗತಿ ಪೂರ್ಣಗೊಳಿಸಿರಬೇಕು ಅಥವಾ
  • ಬಿಪಿಇಡ್ (BPEd) / ಬಿಪಿಇ (BPE) / ಪಿಜಿಡಿಪಿಇಡ್ (PGDPEd) / ಡಿಪ್ಲೊಮಾ ಪೂರ್ಣಗೊಳಿಸಿರಬೇಕು ಅಥವಾ
  • ಎಂಪಿಇಡ್ (MPEd) / ಎಂಎಸ್ (ಕ್ರೀಡೆ) ಪದವಿ ಪಡೆದಿರಬೇಕು

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹25,000 ದಿಂದ ₹35,000/- ವರೆಗೆ ಆಕರ್ಷಕ ಸಂಬಳ ನೀಡಲಾಗುತ್ತದೆ.

ಅರ್ಜಿ ಶುಲ್ಕ:

  • ಎಲ್ಲಾ ಅಭ್ಯರ್ಥಿಗಳಿಗೆ: ₹200/- (ಜಿಎಸ್‌ಟಿ ಪಾವತಿಸಬೇಕಾದದ್ದು ಸೇರಿದಂತೆ)
  • ಪಾವತಿ ವಿಧಾನ : ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

  • ಕೌಶಲ್ಯ ಪರೀಕ್ಷೆ/ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು Indian Institute of Technology Dharwad ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿ ನೊಂದಾಯಿಸಿಕೊಳ್ಳಿ.
  • ಅಗತ್ಯ ದಾಖಲೆಗಳು (ಗುರುತಿನ ಚೀಟಿ, ಶೈಕ್ಷಣಿಕ ಪ್ರಮಾಣಪತ್ರಗಳು, ರೆಸ್ಯೂಮ್) ಅಪ್‌ಲೋಡ್ ಮಾಡಿ.
  • ರೂ. 200 ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ ‘ಸಬ್‌ಮಿಟ್’ ಬಟನ್ ಕ್ಲಿಕ್ ಮಾಡಿ.
  • ಭವಿಷ್ಯದ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ಸಂಖ್ಯೆವನ್ನು ಸುರಕ್ಷಿತವಾಗಿ ಸಂಗ್ರಹಿಸಿಡಿ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 16-02-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-03-2026

Leave a Reply

Your email address will not be published. Required fields are marked *