ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗುವ ಕನಸು ಹೊಂದಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಇದು ಅತ್ಯಂತ ಪ್ರಮುಖ ಮಾಹಿತಿ. ರಾಜ್ಯ ಸರ್ಕಾರವು ಶಿಕ್ಷಕರ ನೇಮಕಾತಿ ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಿ, ಅದರ ಕರಡು ರಾಜ್ಯಪತ್ರವನ್ನು ಪ್ರಕಟಿಸಿದೆ. ಹೊಸ ನಿಯಮದಂತೆ, ಇನ್ನು ಮುಂದೆ ಪದವಿ ಅಥವಾ ಬಿ.ಇಡಿ ಅಂಕಗಳಿಗೆ ಹೆಚ್ಚಿನ ಮಹತ್ವ ಇರುವುದಿಲ್ಲ. ಬದಲಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಾದ CET ಮತ್ತು TET ನಲ್ಲಿ ನೀವು ಪಡೆಯುವ ಅಂಕಗಳೇ ನಿಮ್ಮ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ.ಹಳೆಯ ವ್ಯವಸ್ಥೆಯಲ್ಲಿ ಪದವಿ ಹಾಗೂ ತರಬೇತಿ ಕೋರ್ಸ್ಗಳಿಗೆ ನೀಡಲಾಗುತ್ತಿದ್ದ ವೇಯ್ಟೇಜ್ ಅನ್ನು ಕಡಿಮೆ ಮಾಡಲಾಗಿದ್ದು, ಈಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಶಿಕ್ಷಕರ ನೇಮಕಾತಿ 2026: ಕರ್ನಾಟಕದಲ್ಲಿ ಹೊಸ ವೇಯ್ಟೇಜ್ ನಿಯಮಗಳು. ಸರ್ಕಾರದ ಹೊಸ ಕರಡು ಪ್ರತಿಯ ಪ್ರಕಾರ, ಶಿಕ್ಷಕರ ನೇಮಕಾತಿಯ ಒಟ್ಟು 100 ಅಂಕಗಳಲ್ಲಿ ಬರೋಬ್ಬರಿ 90 ಅಂಕಗಳನ್ನು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (CET ಮತ್ತು TET) ಮೀಸಲಿಡಲಾಗಿದೆ. ಪದವಿ, ಬಿ.ಇಡಿ ಅಥವಾ ಡಿ.ಇಡಿ ಕೋರ್ಸ್ಗಳಿಗೆ ಕೇವಲ 10 ಅಂಕ ನಿಗದಿಪಡಿಸಲಾಗಿದೆ. ಅಂದರೆ ಶೈಕ್ಷಣಿಕ ಕೋರ್ಸ್ಗಳು ಕೇವಲ ನೆಪಮಾತ್ರವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಯೇ ಅಂತಿಮವಾಗಲಿದೆ. 1 ರಿಂದ 8ನೇ ತರಗತಿ ಶಿಕ್ಷಕರ ನೇಮಕಾತಿ (ಅಂಕಗಳ ಹಂಚಿಕೆ) ಪರೀಕ್ಷೆಪ್ರಸ್ತುತ ಅಂಕಗಳು(ಹಳೆಯದು )ಹೊಸ ನಿಯಮದ ಅಂಕಗಳುವ್ಯತ್ಯಾಸಸಿಇಟಿ (CET)357035 ಅಂಕ ಏರಿಕೆ ಟಿಇಟಿ (TET )15205 ಅಂಕ yerikeಡಿ. ಇಡಿ (D. Ed)250817 ಅಂಕ ಇಳಿಕೆ ಪಿಯುಸಿ (PUC)250223 ಅಂಕ ಇಳಿಕೆ ಒಟ್ಟು100100– ಗಮನಿಸಿ: ಈ ಹೊಸ ನಿಯಮದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (CET+TET) ಒಟ್ಟು 90 ಅಂಕಗಳನ್ನು (70+20) ನೀಡಲಾಗಿದ್ದು, ಶೈಕ್ಷಣಿಕ ಅರ್ಹತೆಗೆ (ಪದವಿ/ಡಿಪ್ಲೋಮಾ) ಕೇವಲ 10 ಅಂಕಗಳನ್ನು ನೀಡಲಾಗಿದೆ. ಈ ಬದಲಾವಣೆಯ ಹಿನ್ನೆಲೆ ಏನು? ಕೊರೊನಾ ಅವಧಿಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಮತ್ತು ಸಾಮಾನ್ಯ ಅವಧಿಯಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾದ ಅಭ್ಯರ್ಥಿಗಳ ಅಂಕಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು ಎಂಬ ದೂರುಗಳು ಕೇಳಿಬಂದಿದ್ದವು. ಜೊತೆಗೆ, ಪದವಿ ಹಾಗೂ ತರಬೇತಿ ಕೋರ್ಸ್ಗಳಲ್ಲಿನ ಆಂತರಿಕ ಅಂಕಗಳು ಅಂತಿಮ ಫಲಿತಾಂಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದ್ದವು. ಶಿಕ್ಷಕರ ಬಡ್ತಿ(Promotion) ನಿಯಮಗಳಲ್ಲಿ ಕೂಡ ಬದಲಾವಣೆ! ಹೊಸ ನೇಮಕಾತಿಗೆ ಮಾತ್ರ ಸೀಮಿತವಾಗದೆ, ಈಗಾಗಲೇ ಸೇವೆಯಲ್ಲಿ ಇರುವ ಶಿಕ್ಷಕರ ಬಡ್ತಿ (Promotion) ನಿಯಮಗಳಲ್ಲಿಯೂ ಸರ್ಕಾರ ತಿದ್ದುಪಡಿ ತಂದಿದೆ. ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರು ಹಾಗೂ ಪ್ರೌಢಶಾಲೆಯ ಸಹ ಶಿಕ್ಷಕರು ‘ಗ್ರೇಡ್-2’ ಶಿಕ್ಷಕರ ಹುದ್ದೆಗೆ ಬಡ್ತಿ ಪಡೆಯಲು ಅಗತ್ಯವಿರುವ ಕನಿಷ್ಠ ಸೇವಾ ಅವಧಿಯನ್ನು 5 ವರ್ಷಗಳಿಂದ 12 ವರ್ಷಗಳಿಗೆ ವಿಸ್ತರಿಸಲಾಗಿದೆ. ಪಿಎಸ್ಟಿ (PST) ಹಾಗೂ ಜಿಪಿಟಿ (GPT) ಶಿಕ್ಷಕರು ಕ್ರಮವಾಗಿ 2:1 ರ ಅನುಪಾತದಲ್ಲಿ ಬಡ್ತಿಗೆ ಅರ್ಹರಾಗಿರುತ್ತಾರೆ. ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ: ಈ ಹೊಸ ನಿಯಮಗಳ ಬಗ್ಗೆ ನಿಮಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಸರ್ಕಾರ ಅವಕಾಶ ನೀಡಿದೆ. ಕೊನೆಯ ದಿನ: ಕರಡು ಪ್ರಕಟವಾದ 15 ದಿನಗಳ ಒಳಗೆ. ವಿಳಾಸ: ಅಪರ ಮುಖ್ಯ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, 6ನೇ ಮಹಡಿ, ಬಹು ಮಹಡಿ ಕಟ್ಟಡ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು-560 001. Post navigation Udyogsiri.com | ಕನ್ನಡದಲ್ಲಿ ಸರ್ಕಾರಿ ಉದ್ಯೋಗ & ಸರ್ಕಾರದ ಯೋಜನೆಗಳ ಮಾಹಿತಿ ನರ್ಸ್ ಹುದ್ದೆಗಳ ನೇಮಕಾತಿ | DHFWS Bangalore Recruitment 2026