ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಬೀದರ್ ವಿಭಾಗದಲ್ಲಿ 2026ನೇ ಸಾಲಿನ ನೇಮಕಾತಿಯ ಭಾಗವಾಗಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ನೇರ ಸಂದರ್ಶನ (Walk-in Interview) ಮೂಲಕ ಭಾಗವಹಿಸಬಹುದು.

ಬೀದರ್ ಜಿಲ್ಲೆಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 78 ಹುದ್ದೆಗಳನ್ನು ನೇರ ಸಂದರ್ಶನ (Walk-in Interview) ಮೂಲಕ ಭರ್ತಿ ಮಾಡಲಾಗುತ್ತದೆ.

ಎಲ್ಲೆಲ್ಲಿ ಖಾಲಿ ಇದೆ ಹುದ್ದೆಗಳು

ಬೀದರ್ ವಿಭಾಗದ ವ್ಯಾಪ್ತಿಗೆ ಬರುವ ಈ ಕೆಳಗಿನ ಘಟಕಗಳಲ್ಲಿ ಚಾಲಕರ ಕೊರತೆ ಇದ್ದು, ಆಯ್ಕೆಯಾದವರನ್ನು ಇಲ್ಲಿ ನಿಯೋಜಿಸಲಾಗುತ್ತದೆ.

  • ಬೀದರ್-1 ಮತ್ತು ಬೀದರ್-2 ಘಟಕಗಳು
  • ಭಾಲ್ಕಿ, ಔರಾದ್
  • ಬಸವಕಲ್ಯಾಣ ಮತ್ತು ಹುಮನಾಬಾದ್ ಘಟಕಗಳು.

ಹುದ್ದೆಗಳ ಲೆಕ್ಕಾಚಾರ (ಒಟ್ಟು 78)

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಎರಡು ವಿಧಗಳಿದ್ದು, ಸರ್ಕಾರದ ಮೀಸಲಾತಿ ನಿಯಮಾನುಸಾರ ಹುದ್ದೆಗಳ ಹಂಚಿಕೆ ಮಾಡಲಾಗಿದೆ.

  1. ಹೊಸ ಹುದ್ದೆಗಳು :56 (ಸಾಮಾನ್ಯ -16, SC-5, ST-3, ಪ್ರವರ್ಗ 2A-5 ಇತ್ಯಾದಿ )
  2. ಹಿಂಬಾಕಿ (Backlog) ಹುದ್ದೆಗಳು : 22 ( ಪ್ರವರ್ಗ 2A-15, ಪ್ರವರ್ಗ 1-3, ಪ್ರವರ್ಗ 3A-4)

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೇವಲ ಲೈಸೆನ್ಸ್ ಅಲ್ಲ. ಕೆಳಗಿನ ಅರ್ಹತೆಗಳು ಕಡ್ಡಾಯ:

  1. ಶಿಕ್ಷಣ: ಕನಿಷ್ಠ SSLC ಪಾಸಾಗಿರಬೇಕು.
  2. ಲೈಸೆನ್ಸ್: ಭಾರಿ ವಾಹನ ಚಾಲನೆ ಪರವಾನಿಗೆ (HTV Licence) ಹೊಂದಿರಬೇಕು ಮತ್ತು ಕರ್ನಾಟಕ ಬ್ಯಾಡ್ಜ್ ಇದ್ದಿರಬೇಕು. ಲೈಸೆನ್ಸ್ ಪಡೆದಿದ್ದು ಕನಿಷ್ಠ 2 ವರ್ಷ ಆಗಿರಬೇಕು.
  3. ಪ್ರಮುಖ ಅರ್ಹತೆ: ಅಭ್ಯರ್ಥಿಯು ಈಗಾಗಲೇ KKRTC, KSRTC, BMTC ಅಥವಾ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗಳಲ್ಲಿ ನಡೆಸಲಾದ ಗಣಕೀಕೃತ ಚಾಲನಾ Track Testನ್ನು ಪಾಸ್ ಆಗಿರಬೇಕು. ಅದರ ದಾಖಲಾತಿ ಇದ್ದವರಿಗೆ ಮಾತ್ರ ನೇರ ಸಂದರ್ಶನ ಅವಕಾಶವಿದೆ.

ವಯೋಮಿತಿ

  • ಕನಿಷ್ಠ ವಯಸ್ಸು :24 ವರ್ಷ ತುಂಬಿರಬೇಕು
  • ಗರಿಷ್ಠ ವಯಸ್ಸು :ಸಾಮಾನ್ಯ ವರ್ಗ : 35 ವರ್ಷ, 2A, 2B, 3A, 3B- 38ವರ್ಷ. SC/ST ಮತ್ತು ಪ್ರವರ್ಗ -1: 40 ವರ್ಷ

ಸಂದರ್ಶನ ಯಾವಾಗ?ಎಲ್ಲಿ?

ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.ನೇರವಾಗಿ ಧಾಖಲೆ ಪರಿಶೀಲನೆ ಮತ್ತು ಸಂದರ್ಶನ ನಡೆಯಲಿದೆ.

  • ದಿನಾಂಕ : ಫೆಬ್ರವರಿ 3, 2026 ಮತ್ತು ಫೆಬ್ರವರಿ 4, 2026.
  • ಸಮಯ :ಬೆಳಿಗ್ಗೆ 12 ಗಂಟೆಯ ಒಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
  • ಸ್ಥಳ :ಕಕರಸಾ ನಿಗಮದ ಹಳೆ ಬಸ್ ಸ್ಟಾಂಡ್, ಬೀದರ್ ಬಿಭಾಗೀಯ ಕಚೇರಿ.

ಬೇಕಾಗುವ ದಾಖಲೆಗಳು

ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಕೆಳಗಿನ ಮೂಲ ದಾಖಲೆಗಳು (Original) ಜೊತೆಗೆ 2 ಸೆಟ್ ಜೆರಾಕ್ಸ್ ಪ್ರತಿಗಳು ಹಾಗೂ 2 ಸೆಟ್ ಫೋಟೋಗಳನ್ನು ಕಡ್ಡಾಯವಾಗಿ ತರಬೇಕು:

  • SSLC ಅಂಕಪಟ್ಟಿ
  • ಚಾಲನಾ ಪರವಾನಗಿ (HTV License) ಮತ್ತು ಬ್ಯಾಡ್ಜ್
  • ಬಸ್ ಚಾಲನಾ ಅನುಭವದ ಪ್ರಮಾಣಪತ್ರ
  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ

Leave a Reply

Your email address will not be published. Required fields are marked *