ನಮಸ್ಕಾರ ಸ್ನೇಹಿತರೇ, ನೀವು ಸ್ನಾತಕೋತ್ತರ ಪದವಿ ಅಥವಾ ಪಿಎಚ್‌ಡಿ ಪೂರ್ಣಗೊಳಿಸಿ, ಬೆಂಗಳೂರಿನಲ್ಲಿ ಗೌರವಾನ್ವಿತ ಸರ್ಕಾರಿ ಉದ್ಯೋಗವನ್ನು ಪಡೆಯಲು ಆಸಕ್ತರಾಗಿದ್ದೀರಾ? ಹಾಗಿದ್ದರೆ ನಿಮ್ಮ ಕನಸು ನನಸಾಗುವ ಸುವರ್ಣಾವಕಾಶ ಬಂದಿದೆ.Bangalore International Airport Area Planning Authority (ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ) ವತಿಯಿಂದ ‘ಸಾರಿಗೆ ಯೋಜಕ’ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉದ್ಯೋಗದ ಪ್ರಮುಖ ವಿವರಗಳು: ಸಂಸ್ಥೆಯ ಹೆಸರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ (Bangalore International Airport Area Planning Authority) ಹುದ್ದೆಯ ಹೆಸರು: ಸಾರಿಗೆ ಯೋಜಕ ಒಟ್ಟು ಹುದ್ದೆಗಳು: 01 ಕೆಲಸದ ಸ್ಥಳ: ಬೆಂಗಳೂರು (ದೇವನಹಳ್ಳಿ) ಯಾರು ಅರ್ಜಿ ಸಲ್ಲಿಸಬಹುದು? ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪಿಎಚ್‌ಡಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿಮಾಸ ₹75,000/- ಸಂಬಳ ನೀಡಲಾಗುತ್ತದೆ. ವಯೋಮಿತಿ: ಈ ಹುದ್ದೆಗೆ ಸಂಬಂಧಿಸಿದ ಅಧಿಕೃತ ನಿಯಮಗಳ ಪ್ರಕಾರ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಅಧಿಸೂಚನೆಯನ್ನು ಪರಿಶೀಲಿಸುವುದು ಒಳಿತು. ಅರ್ಜಿ ಶುಲ್ಕ: ಈ ಹುದ್ದೆಗೆ ಅರ್ಜಿ ಶುಲ್ಕವಿಲ್ಲ ಆಯ್ಕೆ ವಿಧಾನ: ಸಂದರ್ಶನ ಅರ್ಜಿ ಸಲ್ಲಿಸುವ ವಿಧಾನ: ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಅದನ್ನು ಸರಿಯಾಗಿ ಭರ್ತಿ ಮಾಡಿ.ಭರ್ತಿ ಮಾಡಿದ ಅರ್ಜಿಯನ್ನು ಅಧಿಸೂಚನೆಯಲ್ಲಿ ಸೂಚಿಸಿದ ವಿಳಾಸಕ್ಕೆ ಸ್ವಯಂವಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು ವಿಳಾಸ ಸದಸ್ಯ ಕಾರ್ಯದರ್ಶಿಗಳು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ (BIAAPA), ಸಂಖ್ಯೆ 333/1, ವಿಜೆ ಸಂಕೀರ್ಣ, 1ನೇ ಮಹಡಿ, ಸೂಲಿಬೆಲೆ ರಸ್ತೆ, ಶಾಂತಿ ನಗರ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ – 562110. ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 11-02-2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-02-2026 Post navigation ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ | UPSC Recruitment 2026 ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ನೇಮಕಾತಿ | NMPT Recruitment 2026