ಉನ್ನತ ಶಿಕ್ಷಣವನ್ನು ಪಡೆಯಬೇಕೆಂಬ ಆಸೆ ಹೊಂದಿರುವ ಕರ್ನಾಟಕದ ವಿದ್ಯಾರ್ಥಿನಿಯರಿಗೆ ಇದು ಒಂದು ಉತ್ತಮ ಅವಕಾಶವಾಗಿದೆ. ಹಣಕಾಸಿನ ಸಮಸ್ಯೆಗಳಿಂದ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಕರ್ನಾಟಕ ಸರ್ಕಾರ ಮತ್ತು ಅಜೀಂ ಪ್ರೇಮ್‌ಜೀ ಫೌಂಡೇಶನ್ ಸಂಯುಕ್ತವಾಗಿ ಆರಂಭಿಸಿರುವ ‘ದೀಪಿಕಾ ವಿದ್ಯಾರ್ಥಿವೇತನ’ ಯೋಜನೆಯ ಎರಡನೇ ಹಂತದ ಅರ್ಜಿ ಪ್ರಕ್ರಿಯೆ ಈಗ ಆರಂಭವಾಗಿದೆ. ನೀವು ಅಥವಾ ನಿಮ್ಮ ಕುಟುಂಬದ ಹೆಣ್ಣು ಮಕ್ಕಳು ಪದವಿ ಅಥವಾ ಡಿಪ್ಲೊಮಾ ಶಿಕ್ಷಣವನ್ನು ಮುಂದುವರಿಸುತ್ತಿದ್ದರೆ, ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ

ಏನಿದು ದೀಪಿಕಾ ಯೋಜನೆ? ಯಾರಿಗೆ ಸಿಗುತ್ತೆ ಈ ಹಣ?

ಈ ಯೋಜನೆಯ ಗುರಿ ಮುಖ್ಯವಾಗಿ ಸರ್ಕಾರಿ ಶಾಲೆ ಹಾಗೂ ಕಾಲೇಜು ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಆರ್ಥಿಕವಾಗಿ ಸಹಾಯ ಮಾಡುವುದಾಗಿದೆ.

ಆರ್ಥಿಕ ನೆರವು : ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿನಿ ವಾರ್ಷಿಕ 30,000 ರೂ. ಆರ್ಥಿಕ ನೆರವು ಪಡೆಯಬಹುದು.

ಕೋರ್ಸ್ ಅವಧಿ: ನಿಮ್ಮ ಇಡೀ ಕೋರ್ಸ್ ಮುಗಿಯುವವರೆಗೆ ಈ ಹಣ ಪ್ರತಿ ವರ್ಷ ನಿಮ್ಮ ಕೈ ಸೇರಲಿದೆ.

ಅರ್ಹತೆಗಳು

  1. ಸರ್ಕಾರಿ ಶಾಲೆ ವಿದ್ಯಾರ್ಥಿ: ಅರ್ಜಿದಾರರು ತಮ್ಮ SSLC ಮತ್ತು PUC ವಿದ್ಯಾಭ್ಯಾಸವನ್ನು ಕರ್ನಾಟಕದ ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಮಾಡಿರತಕ್ಕದ್ದು.
  2. ಪ್ರಸ್ತುತ ನೆರವು: 2025-26ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ varshada ಪದವಿ ಅಥವಾ ಡಿಪ್ಲೊಮಗೆ ದಾಖಲಾಗಿರಬೇಕು.
  3. No ಬ್ಯಾಕ್ಲಾಗ್ : ಇದು ಅತ್ಯಂತ ಪ್ರಮುಖ ನಿಯಮವಾಗಿದೆ. ವಿದ್ಯಾರ್ಥಿನಿಯರು ಪ್ರತಿಯೊಂದು ಸೆಮಿಸ್ಟರ್ ಅಥವಾ ವಾರ್ಷಿಕ ಪರೀಕ್ಷೆಯಲ್ಲಿ ಯಾವುದೇ ವಿಷಯದಲ್ಲಿ ಅಸಫಲರಾಗದೆ ಉತ್ತೀರ್ಣರಾಗಿರಬೇಕು. ಒಂದು ವಿಷಯದಲ್ಲಾದರೂ ಫೇಲ್ ಆದರೆ, ವಿದ್ಯಾರ್ಥಿನಿಯ ವಿದ್ಯಾರ್ಥಿವೇತನವನ್ನು ರದ್ದುಪಡಿಸಲಾಗುತ್ತದೆ.

ದಾಖಲೆಗಳು

  • ಆಧಾರ್ ಕಾರ್ಡ್
  • 10ನೇ ತರಗತಿ ಮತ್ತು ಪಿಯುಸಿ ಅಂಕಪಟ್ಟಿಗಳು.
  • ಕಾಲೇಜಿನ ಪ್ರವೇಶ ಪತ್ರ.
  • ಬ್ಯಾಂಕ್ ಪಾಸ್‌ಬುಕ್.
  • ಪಾಸ್‌ಪೋರ್ಟ್ ಅಳತೆಯ ಫೋಟೋ ಮತ್ತು ಸಹಿ.

ಅರ್ಜಿ ಸಲ್ಲಿಸುವುದು ಹೇಗೆ?

  • ವೆಬ್‌ಸೈಟ್‌ಗೆ ಭೇಟಿ ನೀಡಿ: ಅಜೀಂ ಪ್ರೇಮ್‌ಜೀ ಫೌಂಡೇಶನ್‌ನ ಅಧಿಕೃತ ಪೋರ್ಟಲ್ azimpremjifoundation.org ಗೆ ಲಾಗ್ ಇನ್ ಆಗಿ.
  • ನೋಂದಣಿ (Register): ನಿಮ್ಮ ಹೆಸರು, ಇಮೇಲ್ ಮತ್ತು ಮೊಬೈಲ್ ಸಂಖ್ಯೆ ನೀಡಿ ಮೊದಲು ಖಾತೆ ತೆರೆಯಿರಿ.
  • ವಿವರ ಭರ್ತಿ: ನಿಮ್ಮ ವೈಯಕ್ತಿಕ ಮಾಹಿತಿ, ಆಧಾರ್ ವಿವರ ಹಾಗೂ ಕಾಲೇಜಿನ ಮಾಹಿತಿಯನ್ನು ನಿಖರವಾಗಿ ನಮೂದಿಸಿ.
  • ದಾಖಲೆ ಅಪ್‌ಲೋಡ್: ಆಧಾರ್ ಕಾರ್ಡ್, ಅಂಕಪಟ್ಟಿಗಳು, ಬೋನಫೈಡ್ ಸರ್ಟಿಫಿಕೇಟ್ ಮತ್ತು ಬ್ಯಾಂಕ್ ಪಾಸ್‌ಬುಕ್‌ನ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
  • ಸಬ್‌ಮಿಟ್: ಎಲ್ಲವನ್ನೂ ಪರಿಶೀಲಿಸಿ ಅರ್ಜಿ ಸಲ್ಲಿಸಿ ಮತ್ತು ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಕೊನೆಯ ದಿನಾಂಕ:

ದೀಪಿಕಾ ವಿದ್ಯಾರ್ಥಿವೇತನದ ಎರಡನೇ ಹಂತದ ಅರ್ಜಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಜನವರಿ 31, 2026 ಕೊನೆಯ ದಿನಾಂಕವಾಗಿದೆ. ವಿಶೇಷವಾಗಿ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಎರಡನೇ ಹಂತದ ಅರ್ಜಿಯನ್ನು ಆರಂಭಿಸಲಾಗಿದೆ.

Leave a Reply

Your email address will not be published. Required fields are marked *