ನಮಸ್ಕಾರ ಸ್ನೇಹಿತರೆ, ಬೆಂಗಳೂರುದಲ್ಲಿ ಉತ್ತಮ ವೇತನದ ಜೊತೆಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಆಸೆಯಿದೆಯಾ? ಹಾಗಾದರೆ ನಿಮ್ಮ ಕನಸನ್ನು ಸಾಕಾರಗೊಳಿಸುವ ಅವಕಾಶ ಬಂದಿದೆ. ಭಾರತದ ಪ್ರಮುಖ ನಿರ್ವಹಣಾ ಸಂಸ್ಥೆಗಳಲ್ಲೊಂದು ಆದ Indian Institute of Management Bangalore (IIMB) ಇದೀಗ ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

ಹುದ್ದೆಯ ವಿವರಗಳು:

  • ಸಂಸ್ಥೆಯ ಹೆಸರು : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು
  • ಹುದ್ದೆಗಳ ಸಂಖ್ಯೆ: ವಿವಿಧ
  • ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
  • ಹುದ್ದೆಯ ಹೆಸರು: ರೆಸಿಡೆಂಟ್ ಹಾಸ್ಟೆಲ್ ವಾರ್ಡನ್

ವಿದ್ಯಾರ್ಹತೆ:

  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಪೂರ್ಣಗೊಳಿಸಿರಬೇಕು.
  • ಸಂಬಂಧಿತ ಹುದ್ದೆಗೆ ಅನುಗುಣವಾದ ಅರ್ಹತೆ ಮತ್ತು ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • ಅಭ್ಯರ್ಥಿಗಳನ್ನು ಕೇವಲ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
  • ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.

ಮಾಸಿಕ ವೇತನ:

  • ಈ ಹುದ್ದೆಗೆ ಆಯ್ಕೆಯಾದವರಿಗೆ ತಿಂಗಳಿಗೆ ₹58,000/- ವೇತನ ನೀಡಲಾಗುತ್ತದೆ

ಅರ್ಜಿ ಶುಲ್ಕ:

  • ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?

  1. ಮೊದಲು Indian Institute of Management Bangalore ಅಧಿಕೃತ ವೆಬ್‌ಸೈಟ್ iimb.ac.in ಗೆ ಭೇಟಿ ನೀಡಿ.
  2. ಅಲ್ಲಿ ‘Careers’ ವಿಭಾಗದಲ್ಲಿ ವಸತಿ ನಿಲಯ ವಾರ್ಡನ್ ಹುದ್ದೆಯ ಅಧಿಸೂಚನೆಯನ್ನು ಹುಡುಕಿ.
  3. ಅರ್ಹತೆ ಮತ್ತು ಇತರ ವಿವರಗಳನ್ನು ಗಮನದಿಂದ ಓದಿಕೊಂಡ ನಂತರ, ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  4. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಫೆಬ್ರವರಿ 28ರೊಳಗಾಗಿ ಅರ್ಜಿಯನ್ನು ಸಲ್ಲಿಸಿ.

ಪ್ರಮುಖ ದಿನಾಂಕಗಳನ್ನು ಮರೆಯದಿರಿ:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12-02-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-02 -2026

ಕೊನೆಯ ದಿನಾಂಕ :28-02-2026


Leave a Reply

Your email address will not be published. Required fields are marked *