ನಮಸ್ಕಾರ ಸ್ನೇಹಿತರೆ, ನಾವು ಇಂದಿನ ದಿನಗಳಲ್ಲಿ ಶಕ್ತಿಯಿದ್ದಾಗ ದುಡಿದು ಕುಟುಂಬವನ್ನು ನೋಡಿಕೊಳ್ಳುತ್ತೇವೆ. ಆದರೆ ವಯಸ್ಸಾದ ನಂತರ ಕೆಲಸ ಮಾಡಲು ಸಾಧ್ಯವಾಗದ ಸಮಯ ಬಂದರೆ ನಮ್ಮ ಬದುಕಿಗೆ ಆಧಾರ ಯಾರು? ಈ ವಿಚಾರ ನಿಮಗೂ ಕಾಡುತ್ತಿದೆಯೇ?ಅದಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಂಧನ್ (PM-SYM) ಯೋಜನೆ ನಿಮ್ಮ ಭವಿಷ್ಯಕ್ಕೆ ಭದ್ರತೆ ನೀಡಲು ರೂಪಿಸಲಾಗಿದೆ.ಇದು ಅಸಂಘಟಿತ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಸ್ಥಿರ ಆದಾಯದ ನೆರವು ನೀಡುವ ಯೋಜನೆ. ಇಂದೇ ಸೇರಿ, ನಿಮ್ಮ ನಾಳೆಯ ಬದುಕನ್ನು ಸುರಕ್ಷಿತಗೊಳಿಸಿ.

ಏನಿದು ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಂಧನ್’ (PM-SYM) ಯೋಜನೆ?

ಇದು ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗಾಗಿ ರೂಪಿಸಲಾದ ವಿಶೇಷ ಪಿಂಚಣಿ ಯೋಜನೆ. ನೀವು ಪ್ರತಿಮಾಸ ಅಲ್ಪ ಮೊತ್ತವನ್ನು ಉಳಿತಾಯವಾಗಿ ಪಾವತಿಸಿದರೆ, 60 ವರ್ಷ ವಯಸ್ಸು ಪೂರ್ಣಗೊಂಡ ನಂತರ ಪ್ರತಿ ತಿಂಗಳು ₹3,000 ಪಿಂಚಣಿ ಪಡೆಯಬಹುದು.ಅಂದರೆ, ವರ್ಷಕ್ಕೆ ಒಟ್ಟು ₹36,000 ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

  • ಕಾರ್ಪೆಂಟರ್‌ಗಳು, ಮೀನುಗಾರರು, ಹಮಾಲಿಗಳು, ಟೈಲರ್‌ಗಳು, ರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಮನೆಯಲ್ಲಿ ಕೆಲಸ ಮಾಡುವವರು ಈ ಯೋಜನೆಗೆ ಸೇರಬಹುದು.
  • ನಿಮ್ಮ ವಯಸ್ಸು 18 ರಿಂದ 40 ವರ್ಷದೊಳಗಿರಬೇಕು.
  • ನಿಮ್ಮ ಮಾಸಿಕ ಆದಾಯ ₹15,000 ಕ್ಕಿಂತ ಕಡಿಮೆ ಇರಬೇಕು.
  • ನೀವು EPFO, ESIC ಅಥವಾ NPS ಯೋಜನೆಗಳ ಸದಸ್ಯರಾಗಿರಬಾರದು.

ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

  • ವೆಬ್‌ಸೈಟ್‌ಗೆ ಭೇಟಿ ನೀಡಿ: ನಿಮ್ಮ ಮೊಬೈಲ್‌ನ ಕ್ರೋಮ್ ಬ್ರೌಸರ್‌ನಲ್ಲಿ maandhan.in ಅಧಿಕೃತ ವೆಬ್‌ಸೈಟ್ ತೆರೆಯಿರಿ
  • Self Enrollment ಆಯ್ಕೆ ಮಾಡಿ: ಮುಖಪುಟದಲ್ಲಿ ‘Click here to apply now’ ಮೇಲೆ ಕ್ಲಿಕ್ ಮಾಡಿ, ನಂತರ ‘Self Enrollment’ ಆಯ್ಕೆಯನ್ನು ಆರಿಸಿ.
  • ಮೊಬೈಲ್ ಸಂಖ್ಯೆ ನಮೂದಿಸಿ: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ‘Proceed’ ಒತ್ತಿ. ಫೋನ್‌ಗೆ ಬರುವ OTP ಅನ್ನು ನಮೂದಿಸಿ ಲಾಗಿನ್ ಆಗಿ.
  • ಮಾಹಿತಿ ಭರ್ತಿ ಮಾಡಿ: ನಿಮ್ಮ ಹೆಸರು, ಆಧಾರ್ ಕಾರ್ಡ್ ಸಂಖ್ಯೆ, ಜನ್ಮ ದಿನಾಂಕ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಸರಿಯಾಗಿ ನಮೂದಿಸಿ.
  • ನಾಮಿನಿ ವಿವರ ಸೇರಿಸಿ: ನಿಮ್ಮ ನಂತರ ಹಣ ಪಡೆಯುವ ನಾಮಿನಿ ಹೆಸರನ್ನು ದಾಖಲಿಸಿ.
  • ಮೊದಲ ಕಂತು ಪಾವತಿ ಮಾಡಿ: ನಿಮ್ಮ ವಯಸ್ಸಿಗೆ ಅನುಗುಣವಾಗಿ ನಿಗದಿಯಾದ ಮೊದಲ ತಿಂಗಳ ಪ್ರೀಮಿಯಂ ಮೊತ್ತವನ್ನು ಆನ್‌ಲೈನ್ ಮೂಲಕ ಪಾವತಿಸಿ.
  • ಕಾರ್ಡ್ ಡೌನ್‌ಲೋಡ್ ಮಾಡಿ: ಪ್ರಕ್ರಿಯೆ ಪೂರ್ಣಗೊಂಡ ನಂತರ ‘ಶ್ರಮ ಯೋಗಿ ಪೆನ್ಷನ್ ಕಾರ್ಡ್’ ಲಭ್ಯವಾಗುತ್ತದೆ. ಅದನ್ನು ಡೌನ್‌ಲೋಡ್ ಮಾಡಿ ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್.
  • ಉಳಿತಾಯ ಬ್ಯಾಂಕ್ ಖಾತೆ
  • ಬ್ಯಾಂಕ್ ಪಾಸ್‌ಬುಕ್ ಮತ್ತು ಮೊಬೈಲ್ ಸಂಖ್ಯೆ.

Leave a Reply

Your email address will not be published. Required fields are marked *