ನಮಸ್ಕಾರ ಸ್ನೇಹಿತರೇ, ನೀವು ಉತ್ತಮ ವೇತನದ ಸರ್ಕಾರಿ ಉದ್ಯೋಗಕ್ಕಾಗಿ ನಿರೀಕ್ಷಿಸುತ್ತಿದ್ದೀರಾ? ಅದೂ ನಮ್ಮ ಕರಾವಳಿ ಪ್ರದೇಶವಾದ ಉಡುಪಿಯಲ್ಲಿ ಕೆಲಸ ಮಾಡುವ ಒಳ್ಳೆಯ ಅವಕಾಶ ನಿಮಗಾಗಿ ಸಿದ್ಧವಾಗಿದೆ. ಹೌದು, ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL) ವಿವಿಧ ಸೂಪರ್ವೈಸರ್ (Supervisor) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ. ಹುದ್ದೆಯ ಮಾಹಿತಿ: ಸಂಸ್ಥೆಯ ಹೆಸರು: ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಹುದ್ದೆಯ ಹೆಸರು: ಸೂಪರ್ವೈಸರ್ (Supervisor) ಖಾಲಿ ಹುದ್ದೆಗಳ ಸಂಖ್ಯೆ: 15 ಕೆಲಸದ ಸ್ಥಳ: ಉಡುಪಿ, ಕರ್ನಾಟಕ ವಿದ್ಯಾರ್ಹತೆ: • ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಐಟಿಐ, ಮೆಕ್ಯಾನಿಕಲ್ / ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ, ಬಿ.ಕಾಂ, ಬಿಬಿಎಂ ಅಥವಾ ಬಿಬಿಎ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 22-04-2026 ರಂದು 45 ವರ್ಷಗಳನ್ನು ಮೀರಿರಬಾರದು. ಮಾಸಿಕ ವೇತನ : ಮಾಸಿಕ ₹40,650 – 44,164/- ವೇತನ ನೀಡಲಾಗುತ್ತದೆ. ಅರ್ಜಿ ಶುಲ್ಕ: SC/ ST/ PWBD ಅಭ್ಯರ್ಥಿಗಳಿಗೆ: ಇಲ್ಲ ಇತರ ಎಲ್ಲಾ ಅಭ್ಯರ್ಥಿಗಳಿಗೆ: ₹300/- ಪಾವತಿ ವಿಧಾನ: ಆನ್‌ಲೈನ್ ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ. ಪವರ್ ಪಾಯಿಂಟ್ ಪ್ರಸ್ತುತಿಕೆ. ಸಂದರ್ಶನ ಅರ್ಜಿ ಸಲ್ಲಿಸುವುದು ಹೇಗೆ? ಮೊದಲು ಅಧಿಕೃತ ವೆಬ್‌ಸೈಟ್ https://udupicsl.com/� ಗೆ ಭೇಟಿ ನೀಡಿ. Recruitment’ ವಿಭಾಗದಲ್ಲಿ ‘Supervisor’ ಸಂಬಂಧಿಸಿದ ಅಧಿಸೂಚನೆಯನ್ನು ಗಮನದಿಂದ ಓದಿ. ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿ. ಅನ್ವಯಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಿ, ನಂತರ ಫಾರ್ಮ್ ಅನ್ನು ಸಲ್ಲಿಸಿ. ಪ್ರಮುಖ ದಿನಾಂಕಗಳು : ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 02-04-2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-04-2026 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 22-04-2026 Post navigation Shram Yogi Mandan ಯೋಜನೆ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಿ ರೈಲ್ವೆ ನೇಮಕಾತಿ ಮಂಡಳಿ ನೇಮಕಾತಿ | RRB Recruitment 2026